Welcome, Guest   [ Register | Sign In | Take a tour | Adult Filter: On ]

ಇವರು ಯಾರು ಬಲ್ಲಿರೇನು?


ಇವರು ಎಲ್ಲಂರಂತಲ್ಲ ಮೈತುಂಬಾ ಮಣ್ಣು, ಹರಕಲು ಬಟ್ಟೆ, ಕೈಯಲ್ಲೊಂದು ಕೋಲು, ಕುರುಚಲು ಗಡ್ಡ, ಪಾದಕ್ಕೊಂದು ಪಾದರಕ್ಷೆ- ಹೀಗೆ ತನ್ನ ಭಯಾನಕ ವೇಷದೊಂದಿಗೆ ಕೊಕ್ಕಡ ಹಾಗೂ ನೆಲ್ಯಾಡಿ ಪೇಟೆಗಳನ್ನು ಸೂರ್ಯೋದಯದೊಂದಿಗೆ ಆರಂಭಿಸಿ ಸೂರ್ಯಾಸ್ತದವರೆಗೆ ಸುತ್ತಾಡುತ್ತಾರೆ. ರಾತ್ರಿಯಾದಂತೆ ಮಾಯ!

ಇವರಿಗೆ ಕೆಸರು, ಮಣ್ಣು ಎಂದರೆ ತುಂಬ ಇಷ್ಟ. ಸ್ನಾನ ಮಾಡುವುದು ಅಪರೂಪ. ಮಳೆಯಲ್ಲೇನಾದರು ಮೈ ಕ್ಲೀನ್ ಆದರೆ, ಮತ್ತೆ ಹೋಗಿ ಕೆಸರು ಹಾಕಿಕೊಳ್ಳುವ ಅಭ್ಯಾಸವೂ ಉಂಟು.

ಇವರಿಗೆ ನಮ್ಮ ಭಾಷೆ ಬರುವುದಿಲ್ಲ. ಅಸಲಿಗೆ ಯಾರಲ್ಲೂ ಮಾತನಾಡುವುದೂ ಇಲ್ಲ. ಹಿಂದಿ ಅಂತನಿಸುವ ಭಾಷೆಯಲ್ಲಿ ಅದೇನೋ ಮಣ ಮಣ ಅನ್ನುತ್ತಾರೆ. ಪೇಟೆಯಲ್ಲಿರುವ ಪ್ರತೀ ಅಂಗಡಿಗೆ ಹೋಗಿ ತನ್ನ ಭಾಷೆಯಲ್ಲಿ ಅದೇನೋ ಹೇಳುತ್ತಾರೆ.

ಅಂಗಡಿಯ ಯಜಮಾನ ಕೈಗೆ ಹಣ ಇಟ್ಟರೆ ಮಾತ್ರ ಅಲ್ಲಿಂದ ಕದಲುವುದು. ಎಷ್ಟು ಕೊಟ್ಟರೂ ಓ.ಕೆ, ಅದರ ಬಗ್ಗೆ ತಕರಾರಿಲ್ಲ. ಆದರೆ ಕೆಲವೊಮ್ಮೆ ಐದು ರೂ. ಕೊಡಲೇ ಬೇಕು ಎಂದು ಹಠ ಕಟ್ಟುತ್ತಾರೆ. ಕೊಟ್ಟ ಹಣವನ್ನು ಒಂದೋ ಅದೇ ಅಂಗಡಿಯ ಮೇಜಿನ ಮೇಲಿನ ಒಂದು ಕಡೆ ಇಡುತ್ತಾರೆ. ಇಲ್ಲವಾದಲ್ಲಿ ಪಕ್ಕದ ಅಂಗಡಿಯವರಿಗೆ ಕೊಡುತ್ತಾರೆ. ಹಾಗಾಗಿ ಅವರ ಬಳಿ ಒಂದು ರೂ. ಇಲ್ಲ.

ಸುಮಾರು 10-12 ವರ್ಷಗಳಿಂದ ಈ ಪರಿಸರದಲ್ಲಿ ಇವನ ತಿರುಗಾಟವಿದೆ. ಆರಂಭದಲ್ಲಿ ಅದ್ಯಾರೋ ಒಬ್ಬರು ನೀವು ಯಾರೆಂದು ಪ್ರಶ್ನಿಸಿದಾಗ ತನ್ನಲ್ಲಿದ್ದ ಐಡೆಂಟಿಟಿ ಕಾರ್ಡನ್ನು ತೋರಿಸಿದ ಅದರಲ್ಲಿ ಆತ ಸಿಐಡಿ ಆಫೀಸರ್ ಎಂದು ಬರೆದಿತ್ತು ಎಂಬ ಮಾತು ರೂಢಿಯಲ್ಲಿತ್ತು!!

ನೆಲ್ಯಾಡಿ ಪರಿಸರದಲ್ಲಿ ಈತನನ್ನು ಶಂಕರ್ ಎಂದು ಕರೆದರೆ, ಕೊಕ್ಕಡ ಪರಿಸರದಲ್ಲಿ ಈತ ಅಭಿರಾಮ್ ಅಥವಾ ಅಬ್ರಹಾಂ ಎಂದೇ ಚಿರಪರಿಚಿತರು.

ಕನ್ನಡದಲ್ಲಿ ಈತನ ಜೊತೆ ಮಾತನಾಡಿದರೆ ಸಣ್ಣದಾದ ಕುಹಕ ನಗು ಮಾತ್ರ. ಆದರೆ ಹಿಂದಿಯಲ್ಲಿ ಮಾತನಾಡಿದರೆ ಒಂದೋ ಎರಡೋ ಮಾತನಾಡುತ್ತಾರೆ. ಯಾರೊಂದಿಗೂ ಬೆರೆಯದ ಹೆಚ್ಚಾಗಿ ಮೌನವನ್ನೇ ಬಂಗಾರವನ್ನಾಗಿಸಿಕೊಂಡಿರುವ ಇವರ ನಿಜವಾದ ವಿಳಾಸವಾಗಲಿ, ಇವರು ಇಲ್ಲಿ ಬಂದಿರುವ ಉದ್ದೇಶವಾಗಲಿ ಇದುವರೆಗೂ ಯಾರೊಬ್ಬರಿಗೂ ಗೊತ್ತಾಗಿಲ್ಲ.









ಪ್ರತಿಸ್ಪಂದನಗಳು

Re: ಇವರು ಯಾರು ಬಲ್ಲಿರೇನು?
ಈ ವ್ಯಕ್ತಿಯ ವಿಚಿತ್ರ ಪರ್ಸನಾಲಿಟಿಯನ್ನು ಓದಿ ಆಶ್ಚರ್ಯವಾಯಿತು. ರಾತ್ರಿ ಅವರು ಮಾಯವಾಗುತ್ತಾರೆ ಅಂಥ ಬರೆದಿದ್ದೀರಿ, ಸ್ವಲ್ಪ ನೀವು ಗುಪ್ತಚರರ ಕೆಲಸಮಾಡಿ, ಸಂಪೂರ್ಣ ಮಾಹಿತಿ ತಿಳಿಸುವಿರಾ?
Re: ಇವರು ಯಾರು ಬಲ್ಲಿರೇನು?
ಪ್ರಥಮ ಬಾರಿಗೆ ಭಗ್ನ ಪ್ರೇಮದ ಬರಹಗಳಿಂದ ದೂರಸರಿದು ವಿಭಿನ್ನ ಬರಹವನ್ನು ಬರೆದಿದ್ದೀರಿ. ಸಂತಸವಾಯಿತು. ಫೋಟೋ ಕೂಡ ತಾವು ಸೇರಿಸಿದ್ದು ಬರಹಕ್ಕೆ ಗರಿ ಮೂಡಿಸಿದೆ. ಆಗಾಗ ಬರೆಯುತ್ತಿರಿ. ನಿಮ್ಮ ಬರಹದ ನಿರೀಕ್ಷೆಯಲ್ಲಿ..
Re: ಇವರು ಯಾರು ಬಲ್ಲಿರೇನು?
ವಿಚಿತ್ರ ವ್ಯಕ್ತಿನೋ ಹೌದು. ಮಣ್ಣನ್ನು ಮತ್ತಿಕೊಳ್ಳುತ್ತಾರೆಂದರೆ ವಿಚಿತ್ರವಲ್ಲವೇ? ನೀವಾದರೂ ಸ್ವಲ್ಪ ಹುಡುಕಾಡಿ, ಹಿಂದಿಯಲ್ಲಿ ಮಾತಾಡಿ ಯಾರೆಂದು ವಿಚಾರಿಸಿ.
Re: ಇವರು ಯಾರು ಬಲ್ಲಿರೇನು?
ನಾನು ಪಿಯುಸಿಯಲ್ಲಿರುವಾಗ ಈ ವಿಚಿತ್ರ ವ್ಯಕ್ತಿಯ ಬಗ್ಗೆ ಅನೇಕ ಕತೆಗಳು ಊರಲ್ಲೆಲ್ಲಾ ಪ್ರಚಾರದಲ್ಲಿತ್ತು. ಆವತ್ತಿನಿಂದ ಇವತ್ತಿನವರೆಗೂ ಈ ವ್ಯಕ್ತಿಯ ಕುರಿತು ಎಲ್ಲರಿಗೆ ಎಷ್ಟು ತಿಳಿದಿದೆಯೊ ಆ ತಿಳುವಳಿಕೆ ಚುರು ಹೆಚ್ಚಾಗಲಿಲ್ಲ ಆದರೆ ಪರ್ತಕರ್ತರು, ಅದರಲ್ಲೂ ಗ್ರಾಮೀಣ ಪರ್ತಕರ್ತರು ತಮ್ಮ ಪರಿಸರದಲ್ಲಿಯೇ ಇರುವ ಹೊಸ ಹೊಸ ವಿಷಯಗಳನ್ನು ಅನ್ವೇಷಿಸುತ್ತಿರಬೇಕು ಎಂಬ ಮಾತಿಗೆ ಪೂರಕವಾಗಿದೆ ನಿಮ್ಮ ಪ್ರಯತ್ನ. ಗುಡ್ ಲಕ್ ನನಾಲಾ ಇಂಚನೆ ಪೋಸ್ ಪೋಸ್ ವಿಷಯ ಬರೆಯೊಂದಿಪ್ಪುಲೆ. - ಹರಿPrasad!!!
ಹಕ್ಕು ನಿರಾಕರಣೆ