Welcome, Guest   [ Register | Sign In | Take a tour | Adult Filter: On ]

ನಾ ಅಪರಾಧಿಯೇ?...

ನಾ ಅಪರಾಧಿಯೇ, ಅಲ್ಲ ನಿರಾಪರಾಧಿಯೇ
ಮತ್ತೇಕೆ ಅಪರಾಧಗಳು ನನ್ನನ್ನೇ ಸುತ್ತುತ್ತಿವೆ
ದಿನವೆಲ್ಲ ವ್ಯಥೆಯಿಹುದು, ಅದೇನೋ ಕಳವಳ
ಮಾಡದ ತಪ್ಪಿಗೆ ಏಕೀ ಮಾನಸಿಕ ವೇದನೆ
ನಿರಾಮಯವಾಗಿ ಮನಹಗುರಗೊಳಿಸಹೊರಟರೆ
ಮತ್ತದೆ ಕಳೆದ ಕ್ರೂರ ನೆನಪುಗಳ ಕಾಡುವಿಕೆ
ಸಾಕಪ್ಪಾ ಸಾಕು, ನನಗೇನೂ ಬೇಡ ಈ ಜಗದಲಿ
ಮತ್ತೊಮ್ಮೆ ಪುಟ್ಟ ಮಗುವಾಗಿ ಹುಟ್ಟಿ,
ಎಳೆಕಂದನ ಮುಗ್ದತೆಯನ್ನು ಹೊಂದೋಣವೆಂದರೆ
ದೇಹ ಮತ್ತು ಮನಸ್ಸು ಬಲಿತಿದೆ
ಅನುಭವಗಳ ಸರಮಾಲೆಯಲ್ಲಿ
ಮುಂದಿನ ಜೀವನ ನಡೆಸಬೇಕೆಂದಿರುವೆ
ಗಗನಕ್ಕೋ ಭುವಿಗೋ ತಿಳಿಯದಂತಹ ತೊಳಲಾಟ
ಮತ್ತೆ ಮನಸ್ಸು ಆಘಾತಗೊಳಪಟ್ಟೀತೇ?
ಅನಂತಕ್ಕೋ ಅಂತ್ಯಕ್ಕೋ ತಿಳಿಯದಾಗಿದೆ
ಶುಭವಿದಾಯದ ಕೂಗಿಲ್ಲ, ಶುಭಪ್ರಯಾಣದ ಕುರುಹಿಲ್ಲ
ಉಸಿರಿರುವವರೆಗೆ ಪಯಣ ಅನಿವಾರ್ಯ

ಪ್ರತಿಸ್ಪಂದನಗಳು

Re: ನಾ ಅಪರಾಧಿಯೇ?...
ಸ್ಪೂರ್ತಿಯವರೇ, ಕಳೆದ ತಮ್ಮ ಬರಹದ ನಂತರದಲ್ಲಿ ತಮ್ಮ ಅಭಿಮಾನಿಗಳು ವ್ಯಕ್ತಪಡಿಸಿದ ಅನಿಸಿಕೆಗಳ ಹೊರತಾಗಿಯೂ ತಾವು ಇನ್ನೂ "ವಿರಹ", "ಅಪರಾಧಿ"ಯಂತಹ ಭಾವನೆಯಿಂದ ಇನ್ನೂ ಹೊರಬರದಿರುವಂತೆ ತೋರುತ್ತದೆ. ನಿಮ್ಮಲ್ಲಿ ಸ್ಪೂರ್ತಿ ಬರುವುದು ಎಂದು?. ಏಳಿ, ಎದ್ದೇಳಿ, ಉತ್ಸಾಹದೊಂದಿಗೆ ಹೊಸ ಗುರಿಯತ್ತ ಗಮನಹರಿಸಿ..
Re: ನಾ ಅಪರಾಧಿಯೇ?...
ನಿನ್ನನ್ನು ನಾನು ಕಂಡಿರುವ ರೀತಿಗೂ ನಿನ್ನ ಬರಹಗಳು ವ್ಯಕ್ತಪಡಿಸುತ್ತಿರುವ ರೀತಿಗು ಭಿನ್ನತೆಯಿದೆ.......... ನನಗೊಂದು ಎಸ್‌ಎಂಎಸ್ ನೆನಪಿಗೆ ಬರುತ್ತಿದೆ. "The mosr laughing person may be having deepest wound"
ಹಕ್ಕು ನಿರಾಕರಣೆ