Welcome, Guest   [ Register | Sign In | Take a tour | Adult Filter: On ]

ನೀನೇಕೆ ನನ್ನ ಕಾಡುವೆ...


ಆಕಸ್ಮಿಕವಾಗಿ ನನ್ನೆಡೆಗೆ ಬೀಸಿದ ಗಾಳಿ
ಮತ್ತೆ ನನ್ನ ಬಿಟ್ಟು ಎತ್ತಕಡೆಯೂ ಹೋಗಲಿಲ್ಲ
ಮೊದಮೊದಲು ನಾನದನ್ನು ತಂಗಾಳಿ ಎಂದು
ಆಸ್ವಾದಿಸಿದೆನು, ಹುಚ್ಚೆದ್ದು ಕುಣಿದೆನು
ನನಗಾಗ ಉಳಿದ ಪ್ರಾಪಂಚಿಕ ಅರಿವಿರಲಿಲ್ಲ
ಆದರೆ ಮುಂದೊಂದು ದಿನ ಅದೇ ಗಾಳಿ
ಬಿರುಗಾಳಿಯಾಗಿ ನನ್ನನ್ನೇ ಸರ್ವನಾಶಗೊಳಿಸೀತು
ಎಂಬ ಸಣ್ಣ ಕಲ್ಪನೆಯೂ ನನಗೆ ತಿಳಿಯದಂತೆ ಮಾಡಿತು
ಏನು ಹೇಳಿದರೇನು? ಎಷ್ಟು ಅತ್ತರೇನು?
ಮತ್ತೆ ಆ ನೆಮ್ಮದಿ, ಆ ನಿಷ್ಕಲ್ಮತೆ ನನಗೆ ದೊರಕೀತೇ?
ಅದು ಬರೀ ಗಾಳಿಯಾಗಿದ್ದರೆ ಸಾಕಾಗಿತ್ತೋ ಏನೋ
ಆದರದು ಬೆಂಕಿಯೊಂದಿಗೆ ಸರಸಾಟಕ್ಕೆ ಇಳಿಯಿತು
ಮಂದಾಗ್ನಿಯೆಂದು ತಿಳಿದು ಸುಮ್ಮನಿದ್ದೆ
ಜ್ವಾಲಾಗ್ನಿಯಾಗವವರೆಗೂ ನನಗದರ ಕಾವು ಮುಟ್ಟಲಿಲ್ಲ
ನನಗೇನು ಗೊತ್ತಿತ್ತು ಮುಂದೊಂದು ದಿನ ಅದು
ಪ್ರಳಯಾಗ್ನಿ ಆದೀತು ಎಂದು..ಏನು ಮಾಡೋಣ
ನಂದಿಸಲಾಗದ ಅಗ್ನಿಯೊಳು ಬೆಂದು ಸುಡುತಿಹೆನು
ಈಗ ಎಷ್ಟು ನೀರು ಸುರಿದರೇನು?
ಸುಟ್ಟು ಭಸ್ಮವಾದದ್ದು ಮತ್ತೆ ಸಿಕ್ಕೀತೇ?
ಮನದಾಗ್ನಿ ತಣಿದೀತೆ?
ಉತ್ತರವಿಲ್ಲದ ಪ್ರಶ್ನೆಗೆ ಉತ್ತರಿಸುವವರಾರು?
ಉಳಿದ ಬೆಂದ ದೇಹವೀಗ ನಿರ್ಜೀವವಾಗಿದೆ
ಈ ಚಿತೆಗೀಗ ಬೇಕಿರುವುದು ಒಂದು ಕೊಳ್ಳಿಯ ಸ್ವರ್ಶ
ಹಾ! ಆವಾಗಲೇ ಈ ಕಾಡುವಿಕೆಗೆ ಅಂತ್ಯವಿದ್ದೀತಲ್ಲವೆ?

ಪ್ರತಿಸ್ಪಂದನಗಳು

Re: ನೀನೇಕೆ ನನ್ನ ಕಾಡುವೆ...
ಮಾರ್ಮಿಕ ಬರಹ ಸ್ವಾತಿಯವರೇ. ನೊಂದ ಬರಹಗಳು ಸಾಕು.!!!!!! ಹರ್ಷಚಿತ್ತರಾಗಿ ಹಾಗೂ ಸಾಧನೆಯ ಛಲದೊಂದಿಗೆ "ಸ್ಪೂರ್ತಿ" ಯ ಬರಹಗಳು ನಿಮ್ಮಿಂದ ಮೂಡಿಬರಲಿ..
Re: ನೀನೇಕೆ ನನ್ನ ಕಾಡುವೆ...
ಕವನದ ಭಾಷೆಯೇನೊ ಒಳ್ಳೆದಿದೆ. ಅದರಲ್ಲಿರುವ ಭಾವನೆ ಮಾತ್ರ ದುಃಖಕರ.
Re: ನೀನೇಕೆ ನನ್ನ ಕಾಡುವೆ...
ಸ್ಪೂರ್ತಿಯವರೇ ಕವನ ಸೂಪರ್ ಆಗಿದೆ. ಭಾವನಾತ್ಮಕವಾಗಿ ಬರೆದಿದ್ದೀರಿ. ಮುಂದಿನ ಕವನ ಪಾಸಿಟಿವ್ ಆಗಿರಲಿ ಎಂಬುದು ನನ್ನ ಆಶಯ ಹಾಗೂ ಅದರ ನಿರೀಕ್ಷೆಯಲ್ಲಿ...
Re: ನೀನೇಕೆ ನನ್ನ ಕಾಡುವೆ...
ಸ್ವಾತಿಯವರೇ, ಕವಿತೆ ಚೆನ್ನಾಗಿದೆ. ಆದರೆ 'ಕಹಿನೆನಪುಗಳು ಯಾಕೆ, ಸ್ಫೂರ್ತಿಯುಕ್ಕಿಸುವ ಸಿಹಿ ನೆನಪುಗಳಿದ್ದರೆ ಓಕೆ'.
Re: ನೀನೇಕೆ ನನ್ನ ಕಾಡುವೆ...
Dear Spoorthi, It is natural to have fire reduce fuel into ashes. Some time succesfully damages 'something'. Its not wise decision to fall in the same well. One should rise from the dust. If we emotionally hurt it takes time to heal. Time is the best healer. Wait till date. In modern days there is no meaning to the word 'LOST THINGS'. PAST IS PAST, foget it. Pray GOD to forgive them. Only GODLINESS enable us to forgive enemies. Now make new likeminded friends. Cultivate a good habit. Pray everyday. Pranayama, Yoga and Asanas help. Every saint had a past. Sinner the FUTURE...why old matters ? If you think you are defeated, you are DEFEATED. If you dare, NOBODY can....No old matters shall have place in mind. Give strong advice to unconcious mind.Think positive. Best article on emotionl sentiments.
Re: ನೀನೇಕೆ ನನ್ನ ಕಾಡುವೆ...
Ri......Spoorthi ellidira............how r u..........
ಹಕ್ಕು ನಿರಾಕರಣೆ