Welcome, Guest   [ Register | Sign In | Take a tour | Adult Filter: On ]

ಭಾವನೆ


ಭಾವನೆಗಳೇ ಇಲ್ಲದ ಜನಗಳವರು ಎಂದು ತಿಳಿದು
ಅವರುಗಳನ್ನು ತೊರೆದು, ಹೊಸ ಜೀವನ ನಡೆಸಲೆಂದು
ಇಲ್ಲಿ, ಈ ಜನಗಳ ಮಧ್ಯೆ ಬಂದೆನು.
ನನ್ನೊಳಗಿನ ಭಾವನೆಗಳಿಗೆ ಬೆಲೆ ಸಿಗುವುದೇ ಎಂದು
ಬಹುದೂರದ ಈ ನಾಡಿನಲ್ಲಿ ಪರಿತಪಿಸಿದೆನು.
ಭಾವನೆಗಳು ಎಂದರೇನೆಂದೇ ತಿಳಿಯದ ಈ ಜನರು
ನನ್ನೊಳಗಿನ ಭಾವನೆಗೆ ಎಲ್ಲಿ ಬೆಲೆ ಕೊಟ್ಟಾರು ?
ಸ್ವಾರ್ಥ, ಅಸೂಯೆ, ಮತ್ಸರಗಳ ಪ್ರತಿಬಿಂಬವನ್ನಷ್ಟೇ
ನಾನಿಲ್ಲಿ ಕಂಡೆ ...........?
ಅಪವಾದ ಎಂಬಂತೆ ಒಂದೆರಡು ಜೀವಗಳು
ನನ್ನ ಭಾವನೆಗಳಿಗೆ ಸ್ಪಂದಿಸುತ್ತಿವೆ.
ಎಲ್ಲಿ ತನಕವೋ ? ಎಷ್ಟು ದಿನವೋ ? ನಾನರಿಯೆ.
ಇದ್ದಷ್ಟು ದಿನ ಸ್ಪಂದಿಸುವವರಾದರೂ
ನನ್ನೊಡನೆ ಇರಲಿ ಎಂದು ಬಯಸುವೆ.
ನನ್ನ ಬಯಕೆ ಈಡೇರುವುದೋ... ಅಥವಾ ?..
ಈಡೇರುವ ಕನಸು ಮಾತ್ರ ಉಳಿಯುವುದೋ ?
ಕಾಯುವಿಕೆ ಮಾತ್ರ ನನಗೀಗ ಉಳಿದಿದೆ

ಪ್ರತಿಸ್ಪಂದನಗಳು

Re: ಭಾವನೆ
"ಹೊರ"ನಾಡಿನಲ್ಲಿ ಖಂಡಿತ ನಿಮ್ಮ ಭಾವನೆಗಳಿಗೆ ಬೆಲೆ ಸಿಕ್ಕೇ ಸಿಗುತ್ತದೆ ಸ್ಪೂರ್ತಿಯವರೇ. ಬೇಸರಿಸದಿರಿ. ಮನಸ್ಸು ತೀರಾ ನೊಂದುಕೊಂಡರೆ ಒಬ್ಬರೇ ಹೋಗಿ ಮರೀನಾ ಬೀಚ್‌ನಲ್ಲಿ ಕುಳಿತುಕೊಳ್ಳಿ. ಖಂಡಿತ ನೆಮ್ಮದಿ ಸಿಗುತ್ತದೆ. ನಾನು ಇದನ್ನು ಪ್ರಯತ್ನಿಸಿ ಲಾಭ ಪಡೆದಿದ್ದೇನೆ
Re: ಭಾವನೆ
ತುಂಬಾ ಚೆನ್ನಾಗಿದೇರಿ... "ಅಪವಾದ ಎಂಬಂತೆ ಒಂದೆರಡು ಜೀವಗಳು ನನ್ನ ಭಾವನೆಗಳಿಗೆ ಸ್ಪಂದಿಸುತ್ತಿವೆ" ಈ ಲೈನ್ ನನಗೆ ಬಹಳ ಹಿಡಿಸಿತು..ಆ ಒಂದೆರೆಡು ಜೀವಗಳಲ್ಲಿ ನನ್ನನ್ನೂ ಸೇರಿಸಿಕೊಳ್ಳಿ ಎಂಬುದು ನನ್ನ ಆಶಯ....
Re: ಭಾವನೆ
Don't think about others yaar. Focus on your goal. Reach it. Then the whole world will follow you. Strat focus on your goal today onword. Win the life by winning your goal.
Re: ಭಾವನೆ
ನಿಮ್ಮಲ್ಲಿನ 'ಭಾವನೆ' ಗಳು ಏನೆಂಬುದು ನನಗೆ ಅರ್ಥವಾಗಲಿಲ್ಲವಾದರೂ ನಿಮ್ಮ 'ಭಾವನೆ'ಗಳಿಗೆ ಶೀಘ್ರವೇ ಸ್ಪೂರ್ತಿ, ಸ್ಪಂದನೆ ದೊರೆಯಲಿ...
Re: ಭಾವನೆ
ಚಿಂತಿಸಬೇಡಿ ಸ್ಪೂರ್ತಿಯವರೇ, ಹೊಸ ನಾಡಿನಲ್ಲಿ ಹೀಗಾಗುವುದು ಸಹಜವೇ, ಬಳಿಕ ಎಲ್ಲವು ಸರಿಯಾಗುವುದೆಂದು ನಂಬಿ, ಅನುಮಾನಿಸದಿರಿ. ನಿರೀಕ್ಷೆಯೆ ಜೀವನದ ಸೆಲೆ. ಆದ್ದರಿಂದ ಜೀವನವನ್ನು ಆಶಾವಾದಿಗಳಂತೆ ತೆಗೆದುಕೊಳ್ಳಿ. ನಿಮ್ಮ ಭವಿಷ್ಯ ಉಜ್ವಲವಾಗಿದೆ, ಸ್ವಲ್ಪ ಅದರ ಬಗ್ಗೆ ಯೋಚಿಸಿ, ಇತರರ ಬಗ್ಗೆ ಅಲ್ಲ. ಏನಾಗಲಿ ಮುಂದೆ ಸಾಗಿ...
Re: ಭಾವನೆ
Dear swahi, ನೀವು ಎಲ್ಲರಿಂದಲೂ ಒಂದೇ ರೀತಿಯ ಸ್ಪಂದನವನ್ನು ಬಯಸದಿರಿ.ಎಲ್ಲರನ್ನು ಸ್ನೇಹಿತರನ್ನಾಗಿ ಸ್ವೀಕರಿಸಿ ಅವರ ಭಾವನೆಗಳಿಗೆ ಸ್ಪಂದಿಸಿದರೆ ನಿಜವಾಗಿಯೂ ನಿಮಗೆ ಅವರು ಮರುಸ್ಪಂದಿಸಬಹುದು.ಆದಷ್ಟು ಬೇಗ ನಿಮ್ಮ ಕನಸು ಈಡೇರಲಿ ಎಂಬ ಹಾರೈಕೆಯೊಂದಿಗೆ..
Re: ಭಾವನೆ
ಓ ಮೂಜಿಕಾಸ್ದಾಲೇ ನಿನ್ನ ಭಾವನೆಗೆ ಸ್ಪಂದಿಸುವವರಲ್ಲಿ ನಾನಿದ್ದೀನಲ್ವ? .... ನಾ ನಿಂಗೆ ಪ್ರೋಮಿಸ್ ಮಾಡ್ತೀನಿ..... ನಾನಿರುವೆ ಸದಾ ನಿನ್ನೊಂದಿಗೆ..... ಮತ್ತೆ ನಿನ್ನ ಎದೆಯ 'ಭಾವನೆ'ಗೆ ಬೆಲೆ ಕಡುವವ ಬೇಗ ಬರಲಿ.... ಅತ್ತಯಾ... ಮೂಜಿಕಾಸ್ದಾಲೆ...?
Re: ಭಾವನೆ
ಸ್ಫೂರ್ತಿಯವರೇ ಭಾವನೆಗಳೇ ಇಲ್ಲದ ಜನರು ಎಂಬುದಾಗಿ ನೀವು ಅಪಾರ್ಥ ಮಾಡಿಕೊಂಡಿದ್ದೀರಾ. ಅದು ತಪ್ಪು. ಎಲ್ಲರಿಗೂ ಅವರದೇ ಆದ ಭಾವನೆಗಳಿವೆ, ಅದನ್ನು ನೀವು ಅರ್ಥ ಮಾಡಿಕೊಳ್ಳಬೇಕಾಗಿದೆ. ಸ್ವಾರ್ಥಿಗಳು ಯಾವತ್ತೂ ಬೇರೆಯವರ ಭಾವನಗೆಳಿಗೆ ಬೆಲೆ ಕೊಡುವುದಿಲ್ಲವಂತೆ. ಬೇರೆಯವರ ಭಾವನೆಗಳಿಗೆ ಬೆಲೆ ಕೊಠ್ಠರೆ ಮಾತ್ರವೇ ನಮ್ಮ ಭಾವನೆಗಳಿಗೂ ಬೆಲೆ ಸಿಗುತ್ತದೆ.
Re: ಭಾವನೆ
jeeth ರವರೇ, ಬೇರೆಯವರ ಭಾವನೆ ಬಗ್ಗೆ ನಾನಿಲ್ಲಿ ಬರೆದಿಲ್ಲ, ನನ್ನ ಭಾವನೆಗಳನ್ನು ಅರ್ಥೈಸಿಕೊಂಡು ಅದಕ್ಕೆ ಎಲ್ಲರೂ ಸ್ಪಂದಿಸಬೇಕೆಂದೂ ನಾನು ಹೇಳುತ್ತಿಲ್ಲ. ಆದರೆ ಭಾವನೆಗಳಿಗೆ ಬೆಲೆ ಕೊಡದಷ್ಟು ಆಗದ ಜನಗಳು ನಮ್ಮೊಡನೆ ಇರುವಾಗ ಅಲ್ಲಿ ನಮಗೆ ಬದುಕು ಸಾಗಿಸಲು ಸಾಧ್ಯವೇ ? ಅಷ್ಟಕ್ಕೂ ನಾವು ಮನುಷ್ಯ ಅನ್ನುವ ಜನಾಂಗದಲ್ಲಿ ಹುಟ್ಟಿದ್ದೇವೆ ಅಲ್ಲವೇ ? ಹಾಗಿದ್ದೂ ಪ್ರಾಣಿಗಳಂತೆ ವರ್ತಿಸುವುದು ಎಷ್ಟು ಸರಿ?
Re: ಭಾವನೆ
"ಬದುಕಿನ ಯಶಸ್ಸು ಹೊಂದಾಣಿಕೆಯ ಶಕ್ತಿಯನ್ನು ಅವಲಂಬಿಸಿದೆ" - ಜೋಸೆಫ್ ಪಿರೇರಾ, ಕೊಕ್ಕಡ.
Re: ಭಾವನೆ
"ತುಂಬ ತುಂಬ ಚೆನ್ನಾಗಿದೆ"- ಜೋಯಲ್ ಪಿರೇರಾ.
Re: ಭಾವನೆ
ಸ್ವಾರ್ಥ, ಅಸೂಯೆ, ಮತ್ಸರಗಳ ಮೇಲಾಟದ ನಡುವೆ ದೂರದಲ್ಲಿರುವ ನಿಮ್ಮ ಬದುಕಿಗೆ ಹಾಗೂ ಭಾವನೆಗಳಿಗೆ ಅಷ್ಟೇ ಪ್ರೀತಿಯಿಂದ ಸ್ಪಂದಿಸುತ್ತಿರುವ ಹೃದಯಗಳು ನಿಮ್ಮನ್ನು ಎಂದಿಗೂ ಬಿಟ್ಟುಹೋಗುವುದಿಲ್ಲ. ಎದೆಗುಂದದಿರಿ. ಕನಸು ಕಾಣುತ್ತಲೇ ಇರಿ. ಮುಂದೊಂದು ದಿನ ನಿಜವಾಗುತ್ತದೆ.
ಹಕ್ಕು ನಿರಾಕರಣೆ