Welcome, Guest   [ Register | Sign In | Take a tour | Adult Filter: On ]

ಭಂಡ ರಾಜಕೀಯದ ಪುಕ್ಸಟ್ಟೆ ಸಾಂತ್ವಾನಗಳು


ತಮ್ಮ ಆಡಳಿತ ಆವಧಿಯಲ್ಲಿ ಹಿಂದೂಗಳ ಪವಿತ್ರ ಸ್ಥಾನವಾದ ದತ್ತ ಪೀಠದ ಬಗ್ಗೆ ಕಿಂಚಿತ್ತು ಕಾಳಜಿಯನ್ನು ವಹಿಸದ ವಿರೋಧ ಪಕ್ಷವು ಇದೀಗ ಬಿಜೆಪಿ ಆಡಳಿತವಿರುವ ರಾಜ್ಯ ಸರಕಾರ ಹಾಗೂ ಮಂಗಳೂರು ಪ್ರದೇಶಗಳಲ್ಲಿ ತಮ್ಮ ಪುಕ್ಸಟ್ಟೆ ಸಾಂತ್ವಾನದ ಡೊಂಬರಾಟವನ್ನು ಆರಂಭಿಸಿದೆ.

ತಾನೊಬ್ಬ ಹಿಂದೂ, ಹಿಂದೂಗಳ ನಿಲುವಿಗೆ ತಕ್ಕಮಟ್ಟಿಗಾದರು ಹೊಂದಿಕೊಳ್ಳಬೇಕು, ಹಾಗೂ ಆಗದಿದ್ದರೆ ಸಮ್ಮನೆ ಯಾರ ಕಡೆಗೂ ವಾಲದೆ ಸ್ಥಿರವಾಗಿ ಇರಬೇಕಿತ್ತೋ ಏನೋ, ಆದರೆ ಹಾಗೂ ಮಾಡದೆ ಅನ್ಯ ಧರ್ಮದ ಬಗ್ಗೆ ಬಹಳ ಕಾಳಜಿ ಇರುವವರ ಹಾಗೆ ಫೋಸ್ ಕೊಡುತ್ತಾ ಬಂದಿರುವುದನ್ನು ನೋಡುವಾಗ, ವಿರೋಧ ಪಕ್ಷಕ್ಕೆ ಅರುವತ್ತರ ಅರುಳು ಮರುಳು ಅಂಟಿಗೊಂಡಿದೆ ಎಂದರೆ ಅದು ಅತಿಶಯೋಕ್ತಿ ಎಂದೆನಿಸದು.

ಅಂದು ದತ್ತಪೀಠವು ಹಿಂದೂಗಳಿಗೇ ಸೇರಬೇಕಾದುದು ಎಂದು ಪುರಾವೆಗಳಲ್ಲಿ ತಿಳಿಸಿದ್ದರೂ ಕೂಡಾ ಅದಕ್ಕೆ ಬೆಂಬಲಿಸದ ವಿರೋಧ ಪಕ್ಷವು, ಈಗ ದ.ಕನ್ನಡದಲ್ಲಿ ಕ್ರೈಸ್ತ ಧರ್ಮೀಯರ ಮೇಲೆ ಹಿಂದೂ ಧರ್ಮೀಯರು ದೌರ್ಜನ್ಯವನ್ನು ಎಸಗುತ್ತಿದ್ದಾರೆ ಎಂದಾಗ ಅವರುಗಳ ಮನವೇಕೆ ಕರಗುತ್ತಿದೆ. ಅವರಿಗೆ ಈ ವಿಷಯದ ಬಗ್ಗೆ ಕ್ರೈಸ್ತ ಧರ್ಮದ ಪರವಾಗಿ ಧ್ವನಿಯೇರಿಸುವ ಅವಶ್ಯಕತೆಯಿತ್ತೇ ? ಇಂದು ಕ್ರೈಸ್ತ ಧರ್ಮದ ಮೇಲೆ ಉಂಟಾಗುತ್ತಿರುವ ಅನುಕಂಪ, ಅಂದು ಹಿಂದೂ ಧರ್ಮೀಯರ ಮೇಲೆ ಮುಸ್ಲಿಂ ಧರ್ಮವು ದೌರ್ಜನ್ಯವೆಸಗಿದ್ದಾಗ ಎಲ್ಲಿ ಹೋಗಿತ್ತು ? ತಾನು ಮತ್ತು ತಮ್ಮ ಪಕ್ಷ ಹೆಸರು ಪಡೆಯುವಂತಾಗಲು ಈ ರೀತಿಯ ಅಸಂಭದ್ದ ಅನರ್ಥಗಳನ್ನು ಮಾಡುವುದು ಎಷ್ಟು ಸರಿ ? ಎರಡೂ ಅನ್ಯ ಧರ್ಮಗಳಿಂದಲೂ ನೋವನ್ನು ಉಂಡ ಹಿಂದೂ ಧರ್ಮ ಎಷ್ಟು ದಿನ ಎಂದು ತಾಳ್ಮೆ ವಹಿಸಿಕೊಂಡು ಕುಳಿತು ಕೊಳ್ಳಲು ಸಾಧ್ಯ ?

ಒಳ್ಳೆ ಶಿಕ್ಷಣವನ್ನು ನೀಡುತ್ತಾರೆಂದು ಒಂದು ಕ್ರೈಸ್ತ ಶಾಲೆಗೆ ಹೋದರೆ ಸಾಕು, ಅಲ್ಲಿನ ಕ್ರಮಗಳೋ.. ಬಳೆ ತೊಡಬಾರದು, ಬಿಂದಿ ಇಡಬಾರದು, ಹೂವು ಮುಡಿಯಬಾರದು, ಕಿವಿಗೆ ಓಲೆ ತೊಡಬಾರದು, ಕುಂಕುಮದ ಸ್ಪರ್ಶತೆ ಮುಖದಲ್ಲಿ ಕಂಡು ಬರಬಾರದು, ಹೀಗೆಯೇ ಹಿಂದೂ ವಿರೋಧಿ ಷರತ್ತುಗಳೇ ಹೆಚ್ಚಿನ ಶಾಲೆಗಳಲ್ಲಿ ಮೇಳೈಸುತ್ತಿದೆ. ಏನೋ ಪಾಪ ಎಂದು ಕ್ರೈಸ್ತ ಶಾಲೆಗಳನ್ನು ಆರಂಭಿಸಲು ಅವಕಾಶ ನೀಡಿದರೆ ಹೀಗೆಲ್ಲಾ ವರ್ತಿಸುವುದೇ ? ಹಾಗಾದರೆ ಹಿಂದೂ ಶಾಲೆಗಳಲ್ಲೂ ಅನ್ಯ ಧರ್ಮೀಯರಿಗೆ ಹಿಂದೂ ಧರ್ಮವನ್ನು ಭೋಧಿಸುವ ಮೂಲಕ ಶಿಕ್ಷಣ ನೀಡಬಹುದಿತ್ತಲ್ಲವೇ ? ಆದರೆ ನಾವುಗಳು ಹಾಗಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಮುಖ್ಯವೇ ಹೊರತೂ ಜಾತಿ, ಮತ, ಧರ್ಮಗಳ ಭೋಧನೆಯಲ್ಲ ಎನ್ನುವುದನ್ನು ಅರಿತಿದ್ದೇವೆ ಹಾಗಾಗಿ ನಮಗೆ ಮಂಕು ಬುದ್ದಿಯ ಪ್ರದರ್ಶನದ ಅಗತ್ಯತೆ ಅವಶ್ಯಕವೆನಿಸಲಿಲ್ಲ.

ಇಷ್ಟೆಲ್ಲಾ ಮಾನಸಿಕ ವೇದನೆಯನ್ನು ಅನುಭವಿಸಿಕೊಂಡು ಬಂದಿರುವ ಹಿಂದೂಗಳಿಗೆ ಈಗ ಮತಾಂತರ ಮಾಡುವ ಮೂಲಕ ಮತ್ತೊಮ್ಮೆ ಅವರನ್ನು ಬಡಿದೆಬ್ಬಿಸಿದಾಗ ಅವರಾದರು ಅದನ್ನು ಹೇಗೆ ಸಹಿಸಿಯಾರು ? ಪ್ರತಿಯೊಂದಕ್ಕೂ ಮಿತಿ ಅನ್ನುವುದು ಇರಲೇ ಬೇಕು, ಅತಿಯಾದರೆ ಅದು ವಿಕೋಪಕ್ಕೆ ತಿರುಗೀತು ಅನ್ನುವುದಕ್ಕೆ ಇದೇ ಉತ್ತಮ ಉದಾಹರಣೆ. ಇನ್ನಾದರೂ ಹಿಂದೂಗಳು ಅಂದರೆ ಏನು ಅನ್ನುವುದನ್ನು ಇಲ್ಲಿ ಸಾಬೀತು ಪಡಿಸಿಕೊಳ್ಳುವಂತಾಗಲಿ. ಅದೂ ಅಲ್ಲದೆ ಮುಸ್ಲಿ ಜನಾಂಗದವರನ್ನು ಎಲ್ಲಿಯಾದರು ಈ ಕ್ರೈಸ್ತ ಮತಾಂದರಿಗಳು ಮತಾಂತರ ಮಾಡುತ್ತಿದ್ದರೆ ಅವರು ಸುಮ್ಮನಿರುತ್ತಿದ್ದರೇ, ಒಂದು ವೇಳೆ ಹಾಗಾದರೂ ಕೂಡಾ ಪರಿಸ್ಥಿತಿ ಎಲ್ಲಿವರೆಗೆ ಹೋಗುತ್ತಿತ್ತು ಅನ್ನುವುದನ್ನು ಊಹಿಸಲು ಅಸಾಧ್ಯವಾದೀತು.

ಅಂತೆಯೇ ಪ್ರತಿಯೊಬ್ಬರಿಗೂ ಕೂಡಾ ಅವರ ಧರ್ಮವೇ ಮೇಲೂ, ತನ್ನ ಧರ್ಮವನ್ನು ಒಡೆದು ಇನ್ನೊಂದು ಧರ್ಮಕ್ಕೆ ಸೇರಿದರೆ ಒಳಿತಾದೆನು ಎಂದು ಕೊಂಡರೆ ಅದು ಬರಿ ಭ್ರಮೆಯಷ್ಟೆ. ಒಂದು ಧರ್ಮವನ್ನು ಒಡೆಯುವುದರ ಮೂಲಕ ಇನ್ನೊಂದು ಧರ್ಮದ ಉದ್ದಾರ ಸಾಧ್ಯವೆಂದು ಅಂದುಕೊಂಡರೆ ಅದು ಕನಸಾದೀತೆ ಹೊರತು ನನಸಾಗಲು ಸಾಧ್ಯವಿಲ್ಲ. ತಮ್ಮ ಪಕ್ಷವಿರುವಾಗ ರಾಜ್ಯದಲ್ಲಿ ಈ ರೀತಿಯಾಗಿ ಕೋಮುಗಲಭೆ ನಡೆಯುತ್ತಿರಲಿಲ್ಲ ಎಂದು ವಿರೋಧ ಪಕ್ಷದವರು ವಾದಿಸುತ್ತೀದ್ದಾರಲ್ಲಾ, ಹಾಗಾದರೆ ಅವರ ಸರಕಾರ ಇರುವಾಗ ಯಾವುದೇ ಅಹಿತಕರ ಘಟನೆಗಳು ನಮ್ಮಲ್ಲಿ ನಡೆದೇ ಇಲ್ಲವೇ ?

ಇನ್ನೂ ಬಾಲ್ಯ ಅವಸ್ಥೆ ( ಮೂರುವರೆ ತಿಂಗಳ ಕೂಸು) ಯಲ್ಲಿರುವ ಬಿಜೆಪಿ ಸರಕಾರ, ವಿರೋಧ ಪಕ್ಷದವರಂತೆ ಮುಪ್ಪಿನಾವಸ್ಥೆಗೆ ಬಂದಾಗ ಅವರಿಗಿತಲೂ ಒಳ್ಳೆಯ ರೀತಿಯಲ್ಲಿ ಸರಕಾರ ಸಡೆಸದು ಅನ್ನುವುದಕ್ಕೆ ಏನು ಗ್ಯಾರಂಟಿ ? ಅಷ್ಟೊಂದು ಅನುಭವ ಹೊಂದಿದ ವಿರೋಧ ಪಕ್ಷಗಳು ಸರಕಾರ ನಡೆಸುತ್ತಿರುವಾಗಲೇ ಅನೇಕ ಸಮಸ್ಯೆಗಳು ಬಂದು ಹೋದವು ಎಂದಾಗ ಈ ರೀತಿಯ ಸಣ್ಣ ವುಟ್ಟ ಘಟನೆಗಳು ಬಿಜೆಪಿ ಸರಕಾರಕ್ಕೆ ಮುನ್ಸೂಚನಾ ಪಾಠವಾದೀತೇ ಹೊರತು ಬೇರೇನು ಕೆಟ್ಟ ಪರಿಣಾಮ ಬೀರಲು ಸಾಧ್ಯವಿಲ್ಲ.

ರಾಜ್ಯದಲ್ಲಿ ಒಂದು ಸಮಸ್ಯೆ ಎದುರಾದಾಗ ಸಾಧ್ಯವಾದರೆ ಅದಕ್ಕೆ ತಕ್ಕುದಾದ ಪರಿಹಾರ ಮಾರ್ಗವನ್ನು ಸೂಚಿಸಬೇಕೇ ಹೊರತು ಅಲ್ಲಿ ರಾಜಕೀಯ ನಾಯಕರ ಸಾಂತ್ವನ ಹಾಗೂ ಸಾಮರ್ಥ್ಯದ ಭಂಡ ಪ್ರದರ್ಶನಗಳ ಅವಶ್ಯಕತೆಯಿಲ್ಲ. ಸಾಧ್ಯವಾದರೆ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಬೇಕು ಇಲ್ಲವೇ ಸುಮ್ಮನಿದ್ದು ಬಿಡಬೇಕು. ಕುರ್ಚಿಯ ಆಸೆಗಾಗಿ ಕೀಳು ಮಟ್ಟದ ಯೋಚನೆಯನ್ನು ಮಾಡುತ್ತಾ ಅನೈತಿಕ ಕಾರ್ಯ ಮಾಡುವುದು ಸರಿಯಲ್ಲ. ಇನ್ನಾದರೂ ಹೊಲಸು ರಾಜಕೀಯವನ್ನು ತೊರೆದು ಪ್ರಜಾಪ್ರಭುತ್ವಕ್ಕೆ ಸಮನಾಗಿ ಆಡಳಿತ ನಡೆಸುವಲ್ಲಿ ನಮ್ಮ ನಾಯಕರು ಮನ ಮಾಡಲಿ. ಮೊದಲಿನಿಂದಲೂ ಎಲ್ಲಾ ಧರ್ಮವನ್ನು ಪ್ರೀತಿಸಿಕೊಂಡು ಬಂದಿರುವ ನಮ್ಮ ರಾಜ್ಯದ ಜನತೆ, ಜಾತಿ ರಾಜಕೀಯವನ್ನು ದೂರ ಮಾಡಿ ಸಹಬಾಳ್ವೆಯಿಂದ ಬಾಳುವಂತಾಗಲಿ.

ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ.

ಪ್ರತಿಸ್ಪಂದನಗಳು

Re: ಭಂಡ ರಾಜಕೀಯದ ಪುಕ್ಸಟ್ಟೆ ಸಾಂತ್ವಾನಗಳು
ಸಮಯೋಚಿತವಾಗಿದೆ. ಪ್ರೇಮ ಬರಹಗಳಿಂದ ರಾಜಕೀಯದತ್ತ ಹೊರಳಿದ್ದು ಆಶ್ಚರ್ಯ ಮೂಡಿಸಿತು... ಮುಂದಿನ ಪ್ರೇಮ ಬರಹ ಯಾವಾಗ?
Re: ಭಂಡ ರಾಜಕೀಯದ ಪುಕ್ಸಟ್ಟೆ ಸಾಂತ್ವಾನಗಳು
ನಿಮ್ಮ ಬರಹವು ರಾಜಕೀಯ ಮತ್ತು ಧರ್ಮದ ಬಗ್ಗೆ ತುಂಬಾ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಹಾಗೆ ಎಲ್ಲಾ ಸಮಾಜ ಬಾಂಧವರು ಯೋಚಿಸಿ ಧರ್ಮ, ಜಾತಿಯು ನಿರ್ನಾಮವಾಗಲಿ ಎಂದು ಹಾರೈಸೋಣ. ನಿಮ್ಮ ಬರವಣಿಗೆ ಹೀಗೆ ಮುಂದುವರೆಯಲಿ.
Re: ಭಂಡ ರಾಜಕೀಯದ ಪುಕ್ಸಟ್ಟೆ ಸಾಂತ್ವಾನಗಳು
ಸೇಡಿಗೆ ಸೇಡು ಅಂತ್ಯವಲ್ಲ....ಅನಂತ. ಅನಿವಾರ್ಯ ಸ್ಥಿತಿಯಲ್ಲಿ ಕೂಡಾ ಸಹಬಾಳ್ವೆ, ಸಹೋದರತ್ವ ಅಗತ್ಯ ಎನ್ನುವುದನ್ನು ಮರೆಯಬೇಡಿ.
Re: ಭಂಡ ರಾಜಕೀಯದ ಪುಕ್ಸಟ್ಟೆ ಸಾಂತ್ವಾನಗಳು
ಸ್ವಾತಿಯವರೆ, ನಿಮ್ಮ ಬರಹ ಮನಮುಟ್ಟುವಂತಿದೆ.... keep it up....
Re: ಭಂಡ ರಾಜಕೀಯದ ಪುಕ್ಸಟ್ಟೆ ಸಾಂತ್ವಾನಗಳು
ನಂಗೊಂದು ಸಂಶಯ ಕಣ್ರಿ.... ನೀವು ಭಗತ್ ಸಿಂಗ್ ತಂಗೀನಾ?... ತಪ್ಪು ತಿಳ್ಕೊಬೇಡಿ... ಒಳ್ಳೆ ಮೆಣಶಿನ್ ಕಾಯಿ ತಿಂದಂಗಾತ್ರೀ...... ನಿಮ್ಮ ಲೇಖನ ಓದಿ... ಹಿಂಗೇ ಮುಂದುವರಿಸ್ತೀರಲ್ವಾ ಮತ್ತೆ....?
Re: ಭಂಡ ರಾಜಕೀಯದ ಪುಕ್ಸಟ್ಟೆ ಸಾಂತ್ವಾನಗಳು
ಹಿಂದೂ ಧರ್ಮದ ಬಗ್ಗೆ ಇರುವ ನಿಮ್ಮ ಕಳಕಳಿಯು ಬಿಂಬಲರ್ಹವಾಗಿದೆ. ಹಿಂದೂಗಳ ಮತವು ಇತರ ಧರ್ಮದಂತೆ ಒಂದೇ ಪಕ್ಷ ಅಥವಾ ಒಂದೇ ಧೋರಣೆಗೆ ಸಂಬಂಧಿಸಿದ್ದರೆ, ನಮ್ಮ ಧರ್ಮಕ್ಕೂ ಒಂದು ಬೆಲೆ ಅಂಥ ಬರಬಹುದು. Carry on...
ಹಕ್ಕು ನಿರಾಕರಣೆ