Welcome, Guest   [ Register | Sign In | Take a tour | Adult Filter: On ]

ಚಿಲ್ಲರೆಗಳ ನಡುವೆ ನೋಟಿಗಿಲ್ಲವೇ ಬೆಲೆ...!?



ಎರಡು ವರುಷಗಳ ಹಿಂದೆ, ನಾನಾಗ ದ್ವಿತೀಯ ಬಿ.ಎ.ಯಲ್ಲಿ ಓದುತ್ತಿದ್ದೆ. ಅದೊಂದು ಭಾನುವಾರ, ಉಳಿದ ದಿನಗಳ ಹಾಗೆ ಬೆಳಗ್ಗೆ ಬೇಗನೆ ಎದ್ದು ಹೊರಡುವ ಅನಿವಾರ್ಯತೆ ನನ್ನ ಪಾಲಿಗಿತ್ತು.ಕಾರಣ ಇಂಗ್ಲೀಷ್ ವಿಭಾಗದ ವತಿಯಿಂದ ಪ್ರೋಗ್ರಾಂ ಒಂದನ್ನು ಘಟಿಸಿದ್ದರು.ನಾನು ಎಂದಿನಂತೆ ಪುಸ್ತಕಗಳನ್ನು ಹೊತ್ತ ಬ್ಯಾಗ್, ಕೊಡೆಯನ್ನು ಕೈಯಲ್ಲಿ ನೇತಾಡಿಸಿ, ಪಾದಗಳಿಗೆ ರಕ್ಷಣೆಯನ್ನು ನೀಡುವ ಪಾದರಕ್ಷೆಯನ್ನು ತೊಟ್ಟು ನೇರವಾಗಿ ಬಸ್ಸು ಬರುವ ದಾರಿಗೆ ಮುಖ ಮಾಡಿ ಹೊರಟೆ. ಅರ್ಧದಾರಿಯ ತನಕ ಬಂದವಳೆ ನೆನಪಾದದ್ದು ಆಗ, ಬಸ್ಸಿಗಿಂದು ಪಾಸ್ ಆಗೋದಿಲ್ಲ ಟಿಕೆಟ್ ಮಾಡಿಯೇ ಹೋಗಬೇಕೆನ್ನುವ ಪ್ರಜ್ಞೆ ನನ್ನನ್ನು ಕಾಡಿತ್ತು. ತಕ್ಷಣ ಅದೇ ದಾರಿಗೆ ಮುಖ ಮಾಡಿ ಹೊರಟವಳೇ ಮನೆಯ ದಾರಿ ಹಿಡಿದೆ. ಅಮ್ಮನ ಮುಂದೆ ನಿಂತು ಹಣಕ್ಕೆಂದು ಕೈ ಚಾಚಿದೆ. ನನ್ನ ಅಮ್ಮನೋ ಮರೆಗುಳಿಯಾದ ನನ್ನನ್ನು ಅವರ ಎರಡೂ ಕಣ್ಮುಗಳಿಂದಲೂ ಪ್ರೀತಿಯಿಂದ ವೀಕ್ಷಿಸಿ 50ರೂ ಗಳ ಎರಡು ನೋಟನ್ನು ನನ್ನ ಕೈಗೆ ಇತ್ತರು. 100ರೂ ನನ್ನ ಕೈಗೆ ಸೇರಿದ ಖುಷಿಯಲ್ಲಿ ಅಮ್ಮನಿಗೆ ಟಾಟಾ ಮಾಡಿ ಬಸ್ಸು ಬರುವ ವೇಳೆಯಾಯಿತು ಎಂದು ಹೇಳಿ ಅಲ್ಲಿಂದ ಓಟಕ್ಕಿತ್ತೆ.

ಹಾಗೋ-ಹೀಗೋ ಬಸ್ಸು ನಿಲ್ದಾಣವನ್ನು ತಲುಪಿದ ನಾನು ಬಸ್ಸು ಬರುವ ದಾರಿಯನ್ನೇ ಕಾಯುತ್ತಿರುವಾಗ ಮೊದಲು ಕಂಡದ್ದು ಕಾಲೇಜ್ ಕಡೆಗೆ ಹೋಗುವ ಜೀಪು. ಬಸ್ಸಾದರೇನು ? ಜೀಪಾದರೇನು ? ಹಣ ಕೊಡುವುದು ಕೊಡಲೇ ಬೇಕಲ್ವಾ ? ಎಂದವಳೇ ಖಾಲಿಯಾಗಿದ್ದ ಜೀಪಿನೊಳಗೆ ಹೋಗಿ ಒಂದು ಬದಿಯಲ್ಲಿ ಕುಳಿತೆ. ಸ್ವಲ್ಪ ಸಮಯದರಲ್ಲಿಯೇ ಜೀಪು ಹೊರಟಿತು. ಎಂದಿನಂತೆ ಬಸ್ಸಿನಿಂದ ಇಳಿದು
ಹೋದಂತೆ ಹೋಗಲಾಗುತ್ತದೆಯೇ, ಜೀಪಿನ ಡ್ರೈವರ್ ಗೆ ನನ್ನಲ್ಲಿದ್ದ 50ರೂ ನ ಒಂದು ನೋಟನ್ನು ಆತನ ಕೈಗೆ ಇತ್ತೆ. ಬೆಳಗ್ಗೆ ಬೆಳಗ್ಗೆ ಅದು ಕೂಡ ಮೊದಲ ಟ್ರಿಪ್ ಆಗಿದ್ದ ಕಾರಣ ಆತನಲ್ಲಿ ಚಿಲ್ಲರೆ ಇರಲಿಲ್ಲವೋ ಏನೋ ? ಆತ ನನ್ನ ಮುಖ ನೋಡಿ "ಚಿಲ್ಲರೆ ಇಜ್ಜಾ ?" (ಚಿಲ್ಲರೆ ಇಲ್ವಾ ) ಎಂದ. ನಾನು ಸಹಜವೆಂಬಂತೆ ಇಲ್ಲ ಎಂದೆ.ಆತ ಮುಖವನ್ನು ಸಿಟ್ಟಿನಿಂದ ಗಂಟ್ಟಿಕ್ಕಿಸಿದ, ಆದರೆ ಏನು ಮಾಡೋಣ ಹೇಳಿ ಆತ ನನಗೆ ಬೈಯುವ ಹಾಗಿರಲಿಲ್ಲ.ಏಕೆಂದರೆ ಆತ ನನ್ನ ಊರಿನವನೇ ಆಗಿದ್ದು, ನನ್ನ ಪರಿಚಿತನೂ ಆಗಿದ್ದ. " ಮಲ್ಲೆಜ್ಜಿ ಎಲ್ಲೆ ಕೊರ‌್ಲೆ "(ಪರ‌್ವಾಗಿಲ್ಲ ನಾಳೆ ಕೊಡಿ )ಎಂದ. ಅಷ್ಟಕ್ಕೆ ಸುಮ್ಮನಿರದ ನಾನು " ಮಲ್ಲೆಜ್ಜಿ ಈರೆಗ್ ಚಿಲ್ಲರೆ ತಿಕ್ ನಗ ಕೊರ‌್ಲೆ ". (ಪರ‌್ವಾಗಿಲ್ಲ ನಿಮಗೆ ಚಿಲ್ಲರೆ ಸಿಕ್ಕಿದಾಗ ಕೊಡಿ ) ಎಂದೆ. ಅಂತು ಅವರಿಗೆ ಚಿಲ್ಲರೆ ಯಾವ ಘಳಿಗೆಯಲ್ಲಿ ಸಿಕ್ಕಿತೋ ಗೊತ್ತಿಲ್ಲ, ಮರುದಿನವೇ ನನ್ನು ಕಂಡಾಗ ನನ್ನ ಕೈಗೆ ಚಿಲ್ಲರೆಯನ್ನಿತ್ತು " ನನ ಜೀಪ್ ಡ್ ಬನ್ನಗ ಚಿಲ್ಲರೆ ಪತ ಬರೊಡು ಆವಾ ?" (ಇನ್ನು ಜೀಪ್ ನಲ್ಲಿ ಬರೋವಾಗ ಚಿಲ್ಲರೆ ತರ‌್ಬೇಕು ಆಯ್ತಾ ?) ಎಂದರು. ನಾನು ಸರಿ ಎಂದು ತಲೆಯಲ್ಲಾಡಿಸಿ ಗೆಳತಿಯ ಬಳಿ ಬಂದು " ನೋಡು ನಾವಿನ್ನು ಕಾಲೇಜ್ ಗೆ ಬರೋವಾಗ ಬುಕ್ ಪೆನ್ನುಗಳ ಜೊತೆ ಒಂದು ಪರ್ಸ್ ನಲ್ಲಿ ಚಿಲ್ಲರೆಯ ಗಂಟನ್ನು ತರಬೇಕಾಗುತ್ತೇನೋ" ಎಂದೆ. ಅದಕ್ಕವಳು ಹಾರೈಕೆಯೆಂಬಂತೆ ನಕ್ಕಳು.

ಮತ್ತೊಂದು ದಿನ ನಾನು ಬಸ್ಸಿನಲ್ಲಿ ಕ್ರಯಾಣಿಸುತ್ತಿದ್ದೆ. ನನ್ನಲ್ಲಿ ಪಾಸ್ ಇದ್ದ ಕಾರಣ ಟಿಕೇಟ್ ಮಾಡುವ ಅವಶ್ಯಕತೆ ನನಗಿರಲಿಲ್ಲ. ನನ್ನ ಪಕ್ಕದಲ್ಲೇ ಕುಳಿತಿದ್ದ ಓರ್ವರು ,ಕಂಡೆಕ್ಟರಿಗೆ ಇಪ್ಪತ್ತರ ನೋಟೊಂದನ್ನಿತ್ತು ತಾನು ಹೋಗುವ ಸ್ಥಳದ ಹೆಸರು ಹೇಳಿದರು. ಅದಕ್ಕೆ ಕಂಡೆಕ್ಟರ್ ಸಿಟ್ಟುಗೊಂಡು " ಇಷ್ಟು ಹತ್ರ ಹೋಗೋಕೆ ಇಷ್ಟು ದೊಡ್ಡ ನೋಟ ? ಏನ್ರೀ ಅಷ್ಟು ಗೊತ್ತಾಗಲ್ವಾ ? ಚಿಲ್ರೆ ಕೊಡಿ ಇಲ್ಲಾಂದ್ರೆ ಬಸ್ಸಿಂದ ಇಳಿಯಿರಿ" ಎಂದ . ಪಾಪ ! ಆ ವ್ಯಕ್ತಿಯ ಬಳಿ ಚಿಲ್ಲರೆ ಇಲ್ಲದಿದ್ದರೂ ಅವರು ಬಸ್ಸಿನಿಂದ ಇಳಿದು ಹೋಗಿ, ಯಾರದೋ ಅಂಗಡಿಯ ಬಳಿಹೋಗಿ ಅವರನ್ನು ಕೇಳಿ, ಹಾಗೋ-ಹೀಗೋ ಬಸ್ಸು ಹೊರಡೋ ವೇಳೆಯೊಳಗೆ ಬಂದುಚಿಲ್ಲರೆಯನ್ನು ತಂದು ಕಂಡೆಕ್ಟರ್ ಗೆ ಕೊಟ್ಟರು.

ಈ ಎರಡು ಉದಾಹರಣೆಗಳನ್ನು ಯಾಕೆ ಹೇಳಿದೆ ಎಂದು ಸಂಶಯಿಸಬೇಡಿ. ಇಂದು ನಮ್ಮ ಹೆಚ್ಚಿನ ಎಲ್ಲಾ ವಹಿವಾಟುಗಳು ಚಿಲ್ಲರೆಗಳ ಮೂಲಕವೋ ಸಾಗುತ್ತಿದೆ ಎಂದರೆ ತಪ್ಪಾಗಲಾರದು. ದೇವಾಸ್ಥಾನಕ್ಕೆಂದು ಹೋದರೆ ಹಣ್ಣುಕಾಯಿಯ ಜೊತೆ ಚಿಲ್ಲರೆ , ಅಂಗಡಿಗೆ ಹೋಗಿ ಒಂದು ವಸ್ತು ತೆಗೆದುಕೊಳ್ಳೋಣವೆಂದರೆ change ಕೊಡ್ರೀ ಅಂತಾರೆ , ಹೋಟೆಲ್ ಗೆಂದು ಹೋದರೆ ಚಿಲ್ಲರೆ ಕೊಟ್ಟು ಸಹಕರಿಸಿ ಅಂತಾರೆ , ಬಸ್ಸಲ್ಲಿ , ಜೀಪಲ್ಲಿ , ಆಟೋದಲ್ಲಿ , ಎಲ್ಲಾ ಬಿಡಿ mobile ಗೆ currency ಹಾಕೋಣ ಅಂದ್ರೂ 1 ರೂ. ಚಿಲ್ಲರೆ ಕೊಡಿ ಅಂತಾರೆ. ಕಣ್ಣೆದುರಿಗೆ ಕಾಣುವ ಗೋಡೆಯಲ್ಲಿ ನೇತಾಡಕೊಂಡಿರೋ ಫೋನಲ್ಲಿ ಮಾತನಾಡೋಣ ಅಂದ್ರೂ 1 ರೂಪಾಯಿಯ ಚಿಲ್ಲರೆ ಹಾಕದೆ ನಿನ್ನ ಮಾತಾಡೋಕೆ ಬಿಡಲಾರೆ ಅನ್ತದೆ. ನಮ್ಮ ದೇಹದ ತೂಕವನ್ನು ತಿಳಿದುಕೊಳ್ಳಬೇಕಾದರೂ ಒಂದು ರೂಪಾಯಿಯ ನಾಣ್ಯ ಹಾಕಿದರೆ ಮಾತ್ರ ಸಾಧ್ಯ.

ಹೀಗೆ ದೇವರಿಂದ ಹಿಡಿದು ಪ್ರಪಂಚದಲ್ಲಿರುವ ಬುದ್ದಿಜೀವಿ ಮಾನವನ ಜೀವನದಲ್ಲಿನ ಹೆಚ್ಚಿನ ಎಲ್ಲಾ ವಹಿವಾಟುಗಳು ಚಿಲ್ಲರೆಗಳ ಮೇಲೆ ನಿಂತಿದೆ . ಅಲ್ಲವೇ ? ಹಿಂದೊಂದು ಕಾಲ ಇತ್ತು ಒಂದಾಣೆ , ಎರಡಾಣೆ , ಕಾಲಾಣೆ , ಮುಕ್ಕಲಾಣೆ , ಎಂಟಾಣೆ ಹೀಗೆ ಆಣೆಗಳ ಕಾಲ. ಈ ಆಣೆಗಳು ನಮ್ಮ ಈಗಿನ ನಾಣ್ಯ (ಚಿಲ್ಲರೆ)ಗಳ ರೂಪವನ್ನು ಹೊಂದಿದ್ದವಾಗಿದ್ದವು.ಇದೀಗ ನೋಟುಗಳ ಚಲಾವಣೆಯ ನಡುವೆ ಚಿಲ್ಲರೆಗದಳು ಮತ್ತೆ ಪ್ರಚಲಿತಕ್ಕೆ ಬಂದಿವೆ.

ಅಂತು-ಇಂತು ಈ ಚಿಲ್ಲರೆಗಳ ಸಾಮ್ರಾಜ್ಯದಲ್ಲಿ ನೋಟುಗಳಿಗೆ ಅಧಿಕಾರವೇ ಇಲ್ಲವೋ ಎಂಬುದು ನಿಗೂಢ.

ಪ್ರತಿಸ್ಪಂದನಗಳು

Re: ಚಿಲ್ಲರೆಗಳ ನಡುವೆ ನೋಟಿಗಿಲ್ಲವೇ ಬೆಲೆ...!?
ಚಿಲ್ಲರೆ ಕಥಾನಕ ಚೆನ್ನಾಗಿದೆ. ಇನ್ನಷ್ಟು ವೈಶಿಷ್ಟ್ಯಪೂರ್ಣ ಬರಹಗಳು ತಮ್ಮ ಲೇಖನಿಯಿಂದ ಹೊಮ್ಮಲಿ...
Re: ಚಿಲ್ಲರೆಗಳ ನಡುವೆ ನೋಟಿಗಿಲ್ಲವೇ ಬೆಲೆ...!?
ಸ್ವಾತಿಯವರೇ ತುಂಬ ವಾಸ್ತವವನ್ನು ತುಂಬಾ ಚೆನ್ನಾಗಿ ಬಿಂಬಿಸಿದ್ದೀರಾ? ಹೀಗೇ ಮುಂದುವರಿಸಿ.
ಹಕ್ಕು ನಿರಾಕರಣೆ